ಒಂದು ದಿನ ಆಫೀಸಿಂದ ಬಂದ ನನಗೆ ತುಂಬಾ ಹೊಟ್ಟೆ ಹಸಿತಾ ಇತ್ತು ಅಡುಗೆ ಮನೆಯೊಳಗೆ ಹೊಕ್ಕೆ ತರಕಾರಿ ಬುಟ್ಟಿಯಲ್ಲಿ ಕ್ಯಾಪ್ಸಿಕಂ ಮತ್ತು ಇರುಳಿ ಜೊತೆಗೆ ಟೊಮೋಟ ಅಷ್ಟೇ ಇತ್ತು ಆಗ ಅಕ್ಕಿ ತೊಳೆದು ಅನ್ನ ಮಾಡಲು ಕುಕ್ಕರ್ ತೆಗೆದುಕೊಂಡೆ . ಅಕ್ಕಿ ಮತ್ತು ಬೇಳೆ ತೊಳೆದು ಅಳತೆಗೆ ತಕ್ಕ ನೀರು ಹಾಕಿ ಗ್ಯಾಸ್ ಸ್ಟೋವ್ ಮೇಲೆ ಇಟ್ಟೆ. ತರಾಕರಿ ಬುಟ್ಟೆಯಲ್ಲಿ ಇದ್ದ ಕ್ಯಾಪ್ಸಿಕಂ ಇಂದ ಗೊಜ್ಜು ಮಾಡಿದರೆ ಹೇಗಿರತ್ತೆ ಅಂದುಕೊಂಡು ಕ್ಯಾಪ್ಸಿಕಂ , ಇರುಳಿ ಮತ್ತು ಟೊಮೋಟ ಹೆಚ್ಚಿಕೊಂಡೆ.
ಸ್ಟೋವ್ ಮೇಲೆ ಬಾಂಡಲಿ ಇಟ್ಟು ಎಣ್ಣೆ ಕಾಯಲು ಬಿಟ್ಟು ಸಾಸವೇ ಜೀರಿಗೆ ಹಾಕಿದೆ ಆಮೇಲೆ ಹೆಚ್ಚಿದ ಕ್ಯಾಪ್ಸಿಕಂ , ಇರುಳಿ ಮತ್ತು ಟೊಮೋಟ ಫ್ರೈ ಮಾಡಲು ಶುರು ಮಾಡಿದೆ. ಜೊತೆಗೆ ಹುಣಸೆ ಹಣ್ಣನ್ನು ನೀರಿನಲ್ಲಿ ನೆನೆ ಇಟ್ಟೆ . ಫ್ರೈ ಮಾಡುವಾಗ ಕರಿಬೇವು ಸೊಪ್ಪು , ಹಿಂಗು, ಅರಿಶಿನ ಪುಡಿ , ಗರಂ ಮಸಾಲ, ಉಪ್ಪು ಬೇಯಲು ಬೇಕಾಗುವಷ್ಟು ಹಾಕಿಕೊಂಡೆ . ಎಲ್ಲಾ ಫ್ರೈ ಆದಮೇಲೆ ಹುಣಸೆ ಹಣ್ಣಿನ ರಸ ಬೆಂದ ತರಕಾರಿಯಲ್ಲಿ ಹಾಕಿದೆ. ಅದಕ್ಕೆ ಸ್ವಲ್ಪ ಬೆಲ್ಲ ಆಮೇಲೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಯಲು ಬಿಟ್ಟೆ. ಅಷ್ಟರಲ್ಲಿ ಕುಕ್ಕರ್ ಸೀಟಿ ಹೊಡೆದಿತ್ತು. ಚೆನ್ನಾಗಿ ಬೆಂದ ಮೇಲೆ ಸ್ಟೋವ್ ಆರಿಸಿದೆ. ಆಹ್ ..... ಕ್ಯಾಪ್ಸಿಕಂ ಗೊಜ್ಜು ರೆಡಿ.
No comments:
Post a Comment